ಪಾಲ್, ಹರ್ಮನ್
(1846-1921) ಜರ್ಮನಿಯ ಭಾಷಾಶಾಸ್ತ್ರಜ್ಞ, ಭಾಷೆ, ಇತಿಹಾಸ, ವ್ಯಾಕರಣ ಮತ್ತು ಐತಿಹಾಸಿಕ ಭಾಷಾಶಾಸ್ತ್ರಗಳನ್ನು ಕುರಿತು ಆಧ್ಯಯನ ನಡೆಸಿದ.  ಈತ 1874 ರಲ್ಲಿ ಜರ್ಮನಿಯ ಫ್ರೈಬರ್ಗ್ ಎಂಬಲ್ಲಿಯೂ ಅನಂತರ 1893 ರವರೆಗೆ ಮ್ಯೂನಿಕ್‍ನಲ್ಲೂ ಭಾಷಾಶಾಸ್ತ್ರ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ.  ಇವನು ಜರ್ಮನ್ ಭಾಷೆಯಲ್ಲಿ ಭಾಷಾಚರಿತ್ರೆಯ ತತ್ವಗಳು (1880) ಮಧ್ಯೋನ್ನತ ಜರ್ಮನ್ ವ್ಯಾಕರಣ (1881), ಜರ್ಮನ್ ಭಾಷಾಶಾಸ್ತ್ರ ಭೂಮಿಕೆ (ಮೂರು ಸಂಪುಟಗಳು 1891-93), ಜರ್ಮನ್ ವ್ಯಾಕರಣ (1916-20) ಮುಂತಾದ ಕೃತಿಗಳನ್ನು ಹೊರತಂದಿದ್ದಾನೆ.
(ಎಸ್.ಎಲ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ